ಗುರು ನಮನ

ಶ್ರೀ ಎಂ. ಶಾಂತರಾಜ್

ನಮ್ಮ ಮಾಗಳ ಗ್ರಾಮದಲ್ಲಿ ಅತೀ ಹೆಚ್ಚು ಶಿಷ್ಯ ಬಳಗ ಹೊಂದಿರುವ ಗುರುಗಳ ಸಾಲಿನ ಮೊದಲ 
ಹೆಸರು ನಮ್ಮ ಹೆಮ್ಮೆಯ ಶಾಂತರಾಜ್ ಶಿಕ್ಷಕರು.  ಮಾಗಳ ಗ್ರಾಮದ ಮಧ್ಯಮ ವರ್ಗದ ಸ್ವಾಭಿಮಾನಿ, ಸದಾಚಾರಿ ದಂಪತಿಗಳಾದ ಶ್ರೀ ಪದ್ಮಪ್ಪ & ಸುಶೀಲಮ್ಮನವರ ಮಡಿಲಲ್ಲಿ ದಿನಾಂಕ 1.7. 1957 ರಲ್ಲಿ  ತುಂಬು ಅವಿಭಕ್ತ ಕುಟುಂಬದಲ್ಲಿ ಜನಿಸಿದರು. ಕೇವಲ PUc ನಂತರ Internship ಮಾಡಿಕೊಂಡು Degree ಹೊಂದಿದ ಯಾವೊಬ್ಬ  ಶಿಕ್ಷಕರಿಗಿಂತಲೂ ಕಡಿಮೆಯಿಲ್ಲವೆಂಬಂತೆ ಹೆಚ್ಚು ಪರಿಣಾಮಕಾರಿಯಾಗಿ ಭೋಧಿಸುತ್ತಿದ್ದರು.

ಹಿಂದೆ 7 ನೇ ತರಗತಿಗೆ ಪಬ್ಲಿಕ್ ಪರೀಕ್ಷೆಗಳಿದ್ದಾಗ ಸುಮಾರು 3- 4 ತಿಂಗಳುಗಳ ಕಾಲ ವಿದ್ಯಾರ್ಥಿಗಳೊಂದಿಗೆ ರಾತ್ರಿಯೂ ಕೂಡಾ ಶಾಲೆಯಲ್ಲಿ  ವಾಸ್ತವ್ಯಹೂಡಿ ಮಕ್ಕಳಿಗೆ ತಮ್ಮ ಜ್ಞಾನ ಸಂಪತ್ತನ್ನು ಧಾರೆಯರೆದರು.  ತಾವು ಭೋದಿಸುತ್ತಿದ್ದ ವಿಜ್ಞಾನ & ಆಂಗ್ಲ ಭಾಷಾ ವಿಷಯಗಳು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಸುಲಭವಾಗಿ ಅರ್ಥವಾಗುವಂತಿತ್ತು. ಅವರು ಬರೆಯುವ ಅಕ್ಷರಗಳು ಮುತ್ತು ಪೋಣಿಸಿದ ಹಾಗಿರುತ್ತಿದ್ದವು.. ಕೇವಲ ಪಠ್ಯ ಚಟುವಟಿಕೆಗಳಲ್ಲದೇ, ಪಠ್ಯೇತರ ಚಟುವಟಿಕೆಗಳಾದ ಆಟ, ನಾಟಕ, ಸಂಗೀತ, ಭಾಷಣ, ರಸ ಪ್ರಶ್ನೆ, ಪ್ರಬಂಧ ರಚನೆ, ಇತ್ಯಾದಿಗಳಲ್ಲಿ ಮಕ್ಕಳನ್ನು ಹುರಿದುಂಬಿಸುತ್ತಿದ್ದರು. ಅಷ್ಠೇ ಖುಷಿ, ಗಂಭೀರ, ಹಾಸ್ಯಗಳಿಂದ ವಿದ್ಯಾರ್ಥಿಗಳನ್ನು ಮನಸೂರೆಗೊಳಿಸುತ್ತಿದ್ದರು. ಇತ್ತೀಚಿಗೆ ನಮ್ಮ ನಲ್ಮೆಯ ಶಿಕ್ಷಕರು ಭೋಧನಾ ವೃತ್ತಿಯಿಂದ ನಿವೃತ್ತರಾದರು. ಆದರೆ ರಾಜ್ಯದ ನಾನಾ ಭಾಗ, ಪರರಾಜ್ಯ, ಇತರೆ ದೇಶಗಳಲ್ಲೂ ಇವರುÀ ವಿದ್ಯಾರ್ಥಿಗಳ ಹೃದಯದಲ್ಲಿ ಮರೆಯಲಾರದ ಶಾಶ್ವತ ಮರವಾಗಿ ನೆಲೆನಿಂತಿದ್ದಾರೆ.  ಇಬ್ಬರು ಪುತ್ರರು & ಓರ್ವ ಸಪುತ್ರಿಯನ್ನು ಹೊಂದಿರುವ ಶ್ರೀಯುತರು  ಅವರ ಶ್ರೀಮತಿ & ಮಕ್ಕಳೊಡನೆ (ವಿವೇಕಾನಂದ, ವಿಜಯಾನಂದ, ವೀಣಾ) ಮಾಗಳ  ಗ್ರಾಮದ ತಮ್ಮ ಸ್ವಗೃಹದಲ್ಲಿ ವಾಸವಾಗಿದ್ದಾರೆ. ಗುರುಗಳ ಸಾಧನೆಯನ್ನು ಮೆಚ್ಚಿ ಹಲವು ಸಂಘ, ಸಂಸ್ಥೆಗಳು ಇವರನ್ನು ಗೌರವಿಸಿವೆ.